ಬುಧವಾರ, ಆಗಸ್ಟ್ 7, 2013

ಕನಸು-ನನಸು ...




"ನಾ ಕಂಡ ಕನಸಿಗೆ 
ಬಂದೆ ನೀ ಉಸಿರಾಗಿ,
ಮನದ ಖಾಲಿ ಹಾಳೆಗೆ 
ಬರೆದೆ ನಿನ್ನ ಹೆಸರಾಗಿ,
ನಿನ್ನ ಬಾಳ  ಹಾದಿಗೆ 
ಬರುವೆ ನಾ ಬೆಳಕಾಗಿ ,
ಎನ್ನ ಮನದ ತೋಟದಿ 
ತುಂಬಿ ಬಾ ನೀ ಹಸಿರಾಗಿ."






ಮಂಗಳವಾರ, ಜೂನ್ 18, 2013

ನಿಜವಾಗಲು ಈ ಟೈಮ್ slow ಅಥವಾ fast ಆಗುತ್ತ?

"ಈ ಸೋಮವಾರ ಟೈಮೇ ಹೊಗಲ್ಲ.", "ಒಂದು ವಾರ ಕಳೆದಿದ್ದೆ ತಿಳೀಲಿಲ್ಲ".
ನಿಜವಾಗಲು ಈ ಟೈಮ್ slow  ಅಥವಾ fast ಆಗುತ್ತ? ನಾನು Stephen Hawking ನ ವೀಡಿಯೊ ನೋಡೋ ತನಕ ನಂಬಿರಲ್ಲಿಲ್ಲ . 

GPS ಸೆಟೆಲೈಟ್  ಗಳಲ್ಲಿ atomic clocks ಅಳವಡಿಸಲಾಗಿರುತ್ತದೆ . ಇವು nano second ಗಳಷ್ಟು ನಿಖರವಾಗಿರುತ್ತವೆ . ಇಂತಹುದೇ ಒಂದು clock Earth Surface ಮೇಲೆ ಇಟ್ಟರೆ ಪ್ರತಿದಿನ 38000th of a nanosecond ಹಿ೦ದಿರುತ್ತವೆ. ಅಂದರೆ  ಸೆಟೆಲೈಟ್  ನ atomic clocks  are faster than the atomic clocks on earth surface. ಅಂದರೆ ಭೂಮಿಯ ಗುರುತ್ವಾಕರ್ಷಣೆ time ಅನ್ನು slow ಮಾಡುತ್ತಿದೆ. ಇದನ್ನೇ Time dilation ಎಂದು ಕರೆಯುತ್ತಾರೆ. ನೀವು  blackhole(where even light cannot escape from its gravity) ಹತ್ತಿರ ಹೋಗುವಂತಾದರೆ  the time on earth and the time spent near the black hole is significant. ಅಂದರೆ ಭೂಮಿಯ ಮೇಲೆ ಹತ್ತು ವರ್ಷಗಳು ಅಲ್ಲಿನ 5 ವರ್ಷಗಳಿಗೆ ಸಮವಿರುತ್ತದೆ. ನೀವು blackholeನಿಂದ ಮತ್ತೆ ಭೂಮಿಗೆ ಬಂದರೆ  ನೀವು ಭೂಮಿಯಲ್ಲಿನ ಜನರಿಗಿಂತ ೫ ವರ್ಷ ಚಿಕ್ಕವರಿರುತ್ತೀರಿ . 

ಈಗ ಇರುವ technology ಯಲ್ಲಿ ಇದು ನಿಜ ಮಾಡಲು ಸದ್ಯಕ್ಕಂತೂ ಸಾದ್ಯವಿಲ್ಲ. ಆದರೆ ನಮ್ಮ watchನ ಟೈಮ್ slow ಅಥವಾ fast ಅಂತೂ ಮಾಡಬಹುದು. :)


ಶುಕ್ರವಾರ, ಆಗಸ್ಟ್ 31, 2012

ಬ್ರಹ್ಮನ ಸೃಷ್ಟಿ - ರಾಜನ ರಿಮ್ಮಿ

"ಬ್ರಹ್ಮ ಜೀವಿಗಳ ಸೃಷ್ಟಿಯಲ್ಲಿ ನಿರತನಾದ.ಜೀವಿಗಳಿಗೆ ಅವುಗಳದೇ ಆದ ಗಾತ್ರ, ಬಣ್ಣ ಹಾಗು ವೈಶಿಷ್ಟಗಳನ್ನು ನೀಡಿ ಅವುಗಳಿಗೆ ಜೀವ ತುಂಬಿದ.ಅವು ಜೀವಿಸಲು ಬೇಕಾದ ಎಲ್ಲ ಸೌಕರ್ಯಗಳನ್ನು ಸೃಷ್ಟಿಸಿದ.ಆನೆಗೆ ಬಲವನ್ನೂ,ಕೋಗಿಲೆಗೆ ಮಾಧುರ್ಯವನ್ನೂ, ನವಿಲಿಗೆ ಸೌಂದರ್ಯವನ್ನು ಹೀಗೆ ಆಯಾ ಪ್ರಾಣಿಗಳಿಗೆ ಒಂದೊಂದೇ ಗುಣವನ್ನೂ ನೀಡಿ ಮನುಜನಿಗೆ ಹೆಚ್ಹಿನ ಬುದ್ದಿವಂತಿಕೆಯನ್ನು ನೀಡಿದ.ಎಲ್ಲಾ ಪ್ರಾಣಿಗಳು ಸಂತಸಗೊಂಡವು.ಪ್ರತಿ ಸೃಷ್ಟಿ ಗೂ ಕೊನೆ ಇರಬೇಕೆಂಬ ಯೋಚನೆ ಬ್ರಹ್ಮನಿಗೆ ಬಂತು. ಅದರಂತೆ ಎಲ್ಲರಿಗೂ ಜೀವಿತಾವದಿ ನೀಡತೊಡಗಿದ.ವೃಕ್ಷಗಳಿಗೆ ಐನೂರು ವರ್ಷವನ್ನು ನೀಡಿದ. ನಂತರ ನೀರಿನಲ್ಲಿ ವಾಸಿಸುವ ಜೀವಿಗಳಲ್ಲಿ ಆಮೆಗೆ ಇನ್ನೂರು ವರ್ಷ ಹೀಗೆ ಮುಂದುವರೆಯಿತು. ಹೀಗೆ ಸರದಿಯಲ್ಲಿ ಮನುಷ್ಯನ ಸಾಕು ಪ್ರಾಣಿಗಳಾದ ನಾಯಿ ಹಾಗೂ ಕತ್ತೆಗಳೂ ಬಂದವು.ಕತ್ತೆಗೆ ನಲವತ್ತು ವರ್ಷ ಹಾಗೂ ನಾಯಿಗೆ ನಲವತೈದು ವರ್ಷಗಳ  ಆಯಸ್ಸು ನೀಡಿದ.ಮನುಷ್ಯನಿಗೆ ಇಪ್ಪತ್ತು ವರ್ಷಗಳ ಸ್ವತಂತ್ರ ಜೀವನ ನೀಡಿದ. ಬುದ್ದಿವಂತ ಮನುಷ್ಯನಿಗೆ ತನ್ನ ಸಾಕು ಪ್ರಾಣಿಗಳಿಗೆ ತನಗಿಂತ ಹೆಚ್ಚಿನ ಆಯಸ್ಸು ನೀಡಿದ್ದು ಸಹಿಸಲಾಗಲಿಲ್ಲ.ತನಗೆ ಅ ನಾಯಿ ಕತ್ತೆಗಳ ಆಯಸ್ಸು ಬೇಕೆಂದು ಪಟ್ಟು ಹಿಡಿದ. ಬ್ರಹ್ಮನಿಗೆ ಬೇರೆ ವಿಧಿ ಇಲ್ಲದೆ ಕತ್ತೆ ನಾಯಿಗಳ ಆಯಾಸ್ಸಿನಿಂದ ತಲಾ ಇಪ್ಪತ್ತು ವರ್ಷಗಳನ್ನು ಕಳೆದು ಮನುಷ್ಯನಿಗೆ ನೀಡಿದ.ಮನುಷ್ಯನಿಗೆ ಸಂತಸವಾಯಿತು." 
ನಾನು, ಪ್ರವೀಣ  ನಮ್ಮ ಕಿವಿ ನಿಮಿರಿಸಿಕೊಂಡು ಕಥೆ ಕೇಳುತ್ತಿದ್ದವು.ರಮೇಶ ಮುಂದುವರೆಸಿದ.
"ಮನುಷ್ಯನ ಇಪ್ಪತ್ತು ವರ್ಷಗಳ ಆಯಸ್ಸು ಅರವತ್ತು ಆಯಿತು.ಆದರೆ ಅದರ ಪರಿಣಾಮ ಅನಂತರ ತಿಳಿಯತೊಡಗಿತು. ಅವನು ಮೊದಲ ಇಪ್ಪತ್ತು ವರ್ಷಗಳನ್ನು ಸ್ವತಂತ್ರವಾಗಿ ಕಳೆದನು. ನಂತರದ ಇಪ್ಪತ್ತು ವರ್ಷಗಳನ್ನು ಕತ್ತೆಯಂತೆ ದುಡಿದು ಕಳೆದನು.ಅನಂತರದ ಇಪ್ಪತ್ತು ವರ್ಷಗಳಲ್ಲಿ ನಾಯಿಯಂತೆ ತನ್ನ ಮತ್ತು ತನ್ನವರ ರಕ್ಷಣೆಗೆ ಕಾಯ್ದು ಕಳೆದನು." ರಮೇಶ ಕಥೆ ಮುಗಿಸಿದ.
ಅರವತ್ತು ವರ್ಷಗಳ ನಂತರ ಬದುಕುವವರು ಯಾರ ಆಯಸ್ಸನ್ನು ಪಡೆದರೆಂಬ ಪ್ರಶ್ನೆ ನನಗೆ ಹೊಳೆಯದೆ ಇರಲಿಲ್ಲ. ನಮ್ಮ ಕೈಲಿದ್ದ ಟೀ ಖಾಲಿಯಾಗಿತ್ತು.ನಂತರದ ವಿಷಯ ನಮ್ಮ ರಾಜನ ರಿಮ್ಮಿಯ ಕಡೆ ಹರಿಯಿತು.ಅವನ ರಿಮ್ಮಿ ಸತ್ತು ವಾರವೇ ಆಗಿತ್ತು. ಅದರ ಸಾವಿನಿಂದ ನಮ್ಮ ರಾಜ ಕಸಿವಿಸಿಗೊಂದಿದ್ದ.ಸದಾ ಮೌನಿಯಾಗಿರುತ್ತಿದ್ದ . ಹೌದು ಅವರ ಸಂಬಂದ ಹೇಗಿತ್ತೆಂದರೆ, ರಿಮ್ಮಿಗಾಗಿ ಹೋಟೆಲ್ನಿಂದ ಬಿಸಿ ಪರೋಟ ತಂದು ಹಾಕಿ, ತಾನು ಮನೆಯ ತಂಗಳ ಊಟ ಮಾಡುತ್ತಿದ್ದುದೇ ಸಾಕ್ಷಿ. ಅದು ಕೆವೆಲ ನಾಯಾಗಿರದೆ  ಅವನ ಜೊತೆಗಾರನಾಗಿತ್ತು .ಅಂದು ದುಃಖ ತಡೆಯದೆ ಅತ್ತು ಬಿಟ್ಟಿದ್ದ. ಎಲ್ಲರೂ ಸಮಾಧಾನ ಮಾಡಿ ಕಳುಹಿಸಿದೆವು. ಮುಳ್ಳನ್ನು ಮುಳ್ಳಿ ನಿಂದಲೇ ತೆಗೆಯಬೇಕು ಇದು ಹಳೆಯದಾದರೂ, ನಮ್ಮ ಸುನಿಲನ "ಒಂದು ಹುಡುಗಿ ಮರೆಯಲು ಇನ್ನೊಂದು ಹುಡುಗಿ ಬೇಕು" ಫಿಲಾಸಫಿ ಇಲ್ಲಿಯಾದರು ಉಪಯೋಗವಾಗುವುದೆಂದು ಅಂದುಕೊಂಡೆವು. ಅದರಂತೆ ರಾಜನಿಗೆ ಅವನ ಹುಟ್ಟು ಹಬ್ಬಕ್ಕೆ ಇನ್ನೊಂದು ನಾಯಿಮರಿ ಕೊಡಲು ನಿರ್ಧರಿಸಿದೆವು. ಆದರೆ ರಾಜ ಮತ್ತೆ ಈ ಜ0ಜಾಟ ವೆಲ್ಲ ಬೇಡವೆಂದು ನಿರಾಕರಿಸಿದ.
Shaun Alexander told "Time heals all wounds, unless you pick at them." (ಸಮಯ ಎಲ್ಲಾ ಗಾಯವನ್ನು ಮರೆಸುತ್ತದೆ).


ಬುಧವಾರ, ಮೇ 25, 2011

Chintu- ತುಂಟತನಕ್ಕೆ ಇನ್ನೊಂದು ಹೆಸರು

ಬೆಳಗಿನ ನಿದ್ದೆಯ ಮಂಪರು ಇನ್ನೂ ಕಳೆದಿರಲಿಲ್ಲ. "ಏ ಚಿಂಟು ಸುಮ್ನಿರು, ಹೊಡಿತೀನಿ ನೋಡು" ಎಂದು ಪಕ್ಕದ ಮನೆಯಿಂದ ಮಾತುಗಳು ಕೇಳಿಬಂದವು. ರಾತ್ರಿ ತಡವಾಗಿ ಬಂದಿದ್ದರಿಂದ ಅಮ್ಮ ನನ್ನನ್ನ ನಿದ್ದೆಯಿಂದ ಏಳಿಸಿರಲಿಲ್ಲ. ಅರ್ಜುನ್ (ನಾಲ್ಕು  ವರ್ಷದ ಪಕ್ಕದ ಮನೆಯ ಹುಡುಗ) ಬದಲು ಚಿಂಟು ಎಂದು ಕರೆದಿದ್ದು ಸ್ವಲ್ಪ ಆಶ್ಚರ್ಯವೆನಿಸಿತು. ಕಣ್ಣುಜ್ಜಿಕೊಂಡು ಹೊರಬಂದು ನೋಡಿದೆ. ಪಕ್ಕದ ಮನೆಯೊಳಗೆ ಒಂದು ಕೆಂದನೆಯ ನಾಯಿಮರಿ ಆಟವಾದುತಿತ್ತು. ಆಗ ಅವರು ಚಿಂಟು ಎಂದು ಕರೆದದ್ದು ನಾಯಿಮರಿಗೆ ಎಂದು ದೃಡವಾಯಿತು. 
ಚಿಂಟು ಬಂದು ಒಂದು ವಾರವೂ ಆಗಿರಲಿಲ್ಲ.ಅದನ್ನು ಕಟ್ಟಿಹಾಕಿರಲಿಲ್ಲವಾದ್ದರಿಂದ ಎಲ್ಲಂದರಲ್ಲಿ ಅಡ್ಡಾಡುತ್ತ ನಮ್ಮ ಮನೆಯಲ್ಲೂ ಊಟ ಮಡಿ ಹೋಗುತ್ತಿತ್ತು. ಆ ಮನೆಗೆ ಚಿಂಟು ಬರಲು ಒಂದು ಬಲವಾದ ಕಾರಣವೂ ಇತ್ತು. ಅದು ಕೊನೆಯ ಮನೆಯಾಗಿದ್ದು ಮನೆಯ ಕಂಪೌಂಡಿನ ಆಚೆ ಪೊದೆಗಳು ಬೆಳೆದು ಹಾವು ಹಲ್ಲಿಗಳು ವಾಸ ಮಾಡುವಂತಾಗಿತ್ತು. ವಾರದ ಹಿಂದೆ ಒಂದು ಹಾವು ಕೂಡ ಅವರ ಮನೆಯ ಮುಂದೆ ಹರಿದಾಡಿ ಭಯಬೀತರಾಗಿದ್ದರು. "ನಾಯಿ ಸಾಕಿ  ಹಾವು ಬಂದರೆ ಅದನ್ನು ಬೊಗಳಿ ಓಡಿಸುತ್ತೆ" ಎಂದು ಯಾರೋ ಸಲಹೆ ಕೊಟ್ಟರು. ಆಗ ಎಲ್ಲೋ ಓಡಾಡಿಕೊಂಡಿದ್ದ ಚಿಂಟುವನ್ನು ಹಿಡಿದು ತಂದು ಅದರ ಕಟ್ಟಿಗೆ ಪಟ್ಟಿ ಬಿಗಿದಿದ್ದರು. 
    ಚಿಂಟು ಯಾವಾಗಲು ಬಹಳ ತುಂಟತನ ಮಾಡುತ್ತಿತ್ತು.ಬಂದ ಒಂದೆರಡು ದಿನಗಳಲ್ಲೇ ಅವರು ಬೆಳೆಸಿದ್ದ ಮೆಣಸಿನಕಾಯಿಯ ಗಿಡಗಳು ಒಣಗಲು ಶುರುವಾದವು. ಇದು ಚಿಂಟುವಿನ ಕೆಲಸವೆಂದು ತಿಳಿಯಲು ಹೆಚ್ಹು ಸಮಯ ಹಿಡಿಯಲಿಲ್ಲ. ಆ ಗಿಡಗಳಿಗೆ ಹೊಗಿಬಂದಾಗಲೆಲ್ಲ ಉಚ್ಚೆ ಹುಯ್ದು ಒಣಗುವ ಹಂತ ತಲುಪಿಸಿತ್ತು.ಇನ್ನೂ ಅವರು ಪೂಜೆಗೆಂದು ಬೆಳೆಸಿದ್ದ ಹೂವಿನಗಿಡಗಳ ಕಥೆಯೇ ಬೇರೆ. ಹಿಂದಿನ ಜನ್ಮದಲ್ಲಿ ಅದಾರು ಅದು ಕೊಟ್ಟಿದ್ದ ಹೂವನ್ನು ತಿರಸ್ಕರಿಸಿದ್ದರೋ, ಈ ಜನ್ಮದಲ್ಲಿ ಸಿಕ್ಕ ಸಿಕ್ಕ ಹೂವಿನ ಗಿಡಗಳನ್ನು ಬಗ್ಗಿಸಿ ಕಿತ್ತು ಚಿದ್ರ ಚಿದ್ರ ಮಾಡುತಿತ್ತು. ಆ ಮನೆಯವರಿಗೆ ಪೂಜೆಗೆ ಹೂವಿಗೆಂದು ನಮ್ಮ ಮನೆಗೆ ಬರುವಂತಾಯಿತು.    ಸ್ವತಂತ್ರವಾಗಿ ಅಡ್ಡಾಡಿಕೊಂಡಿದ್ದ ಚಿಂಟು ಅಲ್ಲಿ ಇದ್ದ ಎಂಟೂ ಮನೆಗಳಿಗೆ ತನ್ನ ಬೇಟಿ ನೀಡುತ್ತಿತ್ತು.ಅಲ್ಲಿಯೂ ಅದೇ ದಾಂದಲೆ ನಡೆಸುತ್ತಿತ್ತು. ಅದಕ್ಕೆ ಪಕ್ಕದ ಮನೆಯವರು ಅದನ್ನು ಚೈನ್ ನಲ್ಲಿ ಮರಕ್ಕೆ ಕಟ್ಟಿಹಾಕಿದರು.ಹಾಕಿದ ಸ್ವಲ್ಪ ಹೊತ್ತಿಗೆ ಅದನ್ನು ಸುತ್ತು ಹೊಡೆದು ಕತ್ತು ಬಿಗಿದು ಸತ್ತ ಹಾಗೆ ಬಿದ್ದುಕೊಂಡಿತ್ತು . ಎಲ್ಲಿ ಸತ್ತೆ ಹೋಗುವುದೆಂಬ ಭಯದಲ್ಲಿ ಅದನ್ನು ಕಟ್ಟಿಹಾಕುತ್ತಲೇ ಇರಲಿಲ್ಲ. ಇದೆಲ್ಲವನ್ನು ಆ ಮನೆಯವರು ಕಷ್ಟಪಟ್ಟು ಸಹಿಸಿಕೊಂಡಿದ್ದರು. ಅದಕ್ಕೆ ಊಟ ಹಾಕುವುದನ್ನು ಕಡಿಮೆ ಮಾಡಿದರು.
       ಒಂದು ದಿನ ಇದ್ದಕ್ಕಿದ್ದಂತೆ ಅಕ್ಕ ಪಕ್ಕದ ಮನೆಗಳ ಚಪ್ಪಲಿಗಳ ಕಳ್ಳತನ ಶುರುವಾಯಿತು. ರಾತ್ರಿ ಬಿಟ್ಟಿದ್ದ ನಮ್ಮಮ್ಮನ ಚಪ್ಪಲಿಗಳು ಬೆಳಗಿನ ತನಕ ಮಾಯವಾಗಿತ್ತು. ಆದರೆ ಚಿಂಟು ಒಂದು ಚಪ್ಪಲಿ ಕಚ್ಚಿಕೊಂಡು ಹೋಗುವಾಗ ಸಿಕ್ಕಿಬಿತ್ತು. ಅಂದಿನಿಂದ ಎಲ್ಲರೂ ಚಪ್ಪಲಿಗಳನ್ನು ಕಿಟಕಿಯ ಮೇಲೆ ಅದರ ಕೈಗೆ ಸಿಗದಂತೆ ಇಡಲು ಪ್ರಾರಂಬಿಸಿದರು. ಪಕ್ಕದ ಮನೆಯವರಿಗಂತೂ ಹಾವಿಗಾಗಿ ಮುಂಗುಸಿಯನ್ನು ಸಾಕಿದಂತೆ ಆಗಿತ್ತು. 
          ಇಷ್ಟೆಲ್ಲಾ ತುಂಟತನ ಮಾಡುತ್ತಿದ್ದ ಚಿಂಟು ಮಾತ್ರ, ಅಷ್ಟೇ ತುಂಟನಾಗಿದ್ದ ಅವರ ಮನೆಯ ನಾಲ್ಕು ವರ್ಷದ ಅರ್ಜುನ್ ಕಿವಿ ಎಳೆದಾಡಿದರೂ , ಬಾಲ ಜಗ್ಗಿದರೂ ಸಹಿಸಿಕೊಂಡು ಒಳ್ಳೆ ಸ್ನೇಹಿತರಂತೆ  ಆಟವಾದುತ್ತಿದುದು ನೋಡಲು ನನಗೆ ಮುದ ನೀಡುತ್ತಿತ್ತು. 


ಬುಧವಾರ, ಮಾರ್ಚ್ 16, 2011

Theory Versus Practicals

PUC ತರಗತಿಗಳು ಶುರುವಾಗಿ ಎರಡು ವಾರಗಳೇ ಕಳೆದಿದ್ದವು . ನಮಗೆ ಅದರಲ್ಲೂ ನಮ್ಮ ಯೋಗೀಶನಿಗೆ ಅಂದು ಸಂತಸವೋ ಸಂತಸ.ಏಕೆಂದರೆ  ನಮ್ಮ ಜೀವನದ ಮೊದಲನೇ ಕೆಮಿಸ್ಟ್ರಿ ಲ್ಯಾಬ್. Acids , alkalies , Hydrochloric acid, Sulphuric acid, ಇವುಗಳನ್ನು ಕೇವಲ ಕಿವಿಯಾರೆ ಕೇಳಿಸಿ ಕೊಂಡಿದ್ದೆವು. ಈಗ ಅವುಗಳನ್ನು ಕಣ್ಣಾರೆ ನೋಡುವ ಯೋಗ ಬಂದಿದೆಯೆಂದು ಎಲ್ಲರೂ ಸಂತಸಗೊಂಡಿದ್ದೆವು.ಲ್ಯಾಬ್ ಪ್ರಾರಂಬವಾಯಿತು. ಎಲ್ಲರ ಹಾಜರಾತಿ ತೆಗೆದ ನಂತರ ನಾಲ್ಕು ಜನರಂತೆ ವಿಂಗಡಿಸಿ ಒಂದೊಂದು ಗುಂಪಿಗೂ ಒಂದೊಂದು Experiment ಕೊಟ್ಟರು. ಯೋಗೀಶ, ನಾನು , ಜಯಂತ್ ಹಾಗೂ ರಾಜೇಶ್ ಒಂದು ಗುಂಪಿಗೆ ಸೇರಿದೆವು.   Sodium Hydroxide ಜೊತೆ hydrochloric acid ಬೆರೆಸಿ ಸಾಲ್ಟ್ ಮತ್ತು ನೀರು ಉಂಟಾಗುವುದನ್ನು ನಿರೂಪಿಸಬೇಕಾಗಿತ್ತು. ಲ್ಯಾಬ್ ಅಟೆನ್ ಡರ್ ಬೀಕರ್ಗಳನ್ನು , ಟೆಸ್ಟ್ ಟ್ಯೂಬ್ ಗಳನ್ನೂ  ತಂದಿಟ್ಟ . ಇನ್ನು experiment ಶುರು ಮಾಡಿದೆವು. Sodium Hydroxide ನ ದ್ರಾವಣ ಖಾಲಿಯಾಗಿತ್ತು . ಲ್ಯಾಬ್ ಅಟೆನ್ ಡರ್ ಕೇಳಿದಾಗ ಅಲ್ಲೇ ಒಂದು ಬೀರುವನ್ನು ತೋರಿ ಅಲ್ಲಿ ಇರಿ ,ಬಂದು ಕೊಡುವುದಾಗಿ ಹೇಳಿದ. ನಾವು ಆ ಬೀರುವಿನ ಬಳಿ ನಿಂತೆವು. ಆ ಬೀರುವಿನ ತುಂಬ ಹಲವಾರು ಕೆಮಿಕಲ್ ಗಳು ಇದ್ದವು . ಯೋಗೀಶ  Sodium Hydroxide ಎಂದು ಹೆಸರು ನೋಡಿದ್ದೇ ಅದನ್ನು ಕೈಗೆತ್ತಿಕೊಂಡ. ನೋಡಲು ತೇಟ್ ಕರ್ಪೂರದಂತೆ ಇತ್ತು. ಅದನ್ನು ನೋಡಿದ್ದೇ ಆ ಮುಚ್ಚಳ ತೆಗೆದು ಕೈ ಹಾಕೆ ಬಿಟ್ಟ. "ಇದನ್ನು ಮನೆಗೆ ಒಯ್ಯೋಣ , ಏನಾದರೂ Experiment ಮಾಡೋಣ ಎಂದ. ನಾವು ಒಂದೆರಡು ಆ ಕರ್ಪೂರವನ್ನು ಕೈಗೆ ಎತ್ಹಿಕೊಳ್ಳುವ ಮೊದಲೇ ಯೋಗೀಶ್ ತನ್ನ ಜೋಬಿಗೂ ತುಂಬತೊಡಗಿದ್ದ. ಅಷ್ಟರಲ್ಲಿ ಲ್ಯಾಬ್ ಅಟೆನ್ ಡರ್ ಬಂದ. ಎಲ್ಲರ ಕೈಯಲ್ಲಿ ಇದ್ದ ಆ Sodium Hydroxide pellets ನೋಡಿ " ಏನ್ ಹುಡುಗರೋ ಅದೇನು ಓದ್ತಿರೋ , Sodium Hydroxide corrossive ಅಂತ ಗೊತ್ತಿಲ್ವೇನ್ರೋ ಎಂದು ಹೇಳಿದ್ದೆ  ತಡ , ಎಲ್ಲರೂ ನೀರಿನೆಡೆಗೆ ಓದಿದೆವು. ನೀರಿನಲ್ಲಿ ಕೈ ತೊಳೆಯುವಾಗ ಲೆಚ್ಚರರ್   ಹೇಳುತ್ತಿದ್ದುದು ಜ್ಞಾಪಕಕ್ಕೆ ಬಂತು." sodium hydroxide is a white solid available in pellets. It is highly corrosive.It leave a yellow stain on fabric and paper".  ಕೈ ತೊಳೆದು ನೋಡಿದರೆ ಎಲ್ಲರ ಕೈ ಹಳದಿ ಬಣ್ಣ ವಾಗಿತು. ಯೋಗೀಶನ ಕಥೆಯಂತೂ ಹೇಳ ತೀರದ ಸ್ತಿತಿ ತಲುಪಿತ್ತು.ಅವನ ಕೈ ಮಾತ್ರವಲ್ಲದೆ ಅವನ ಜೋಬು ಕೂಡ ಹಳದಿ ಬಣ್ಣಕ್ಕೆ ತಿರುಗಿತ್ತು. ಎರಡು ದಿನಗಳು ನಮ್ಮ ಕೈಯಿಂದ ಆ ಬಣ್ಣ ಮಾಸಲೇ ಇಲ್ಲ ಮತ್ತು ನಮ್ಮ ಯೋಗೀಶ ಆ ಶರ್ಟ್ ಹಾಕಿದ್ದು ನೋಡಲೇ ಇಲ್ಲ. :)

ಬುಧವಾರ, ಮಾರ್ಚ್ 9, 2011

ಸಂಕಲ್ಪ

ಇವತ್ತಾದರೂ ಆಫೀಸಿಗೆ ಬೇಗ ತಲುಪುವುದೆಂದು ನಿಶ್ಚಯಿಸಿ ೧೫ ನಿಮಿಷ ಬೇಗ ಮನೆ ಬಿಟ್ಟೆ. ದಾರಿಯಲ್ಲಿ ತಿಂಡಿ ಮುಗಿಸಿ ಬೈಕ್ ಹತ್ತಿ ಹೊರಟಿದ್ದೆ ೪ಥ್ ಬ್ಲಾಕ್ ನ ಸಿಗ್ನಲ್ ಲೈಟ್ ಕೆಂಪನೆ ಮುಖ ತೋರಿಸಿ ನಿಂತು ಹೊರಡುವಂತೆ ಮಾಡಿತು. ಅದರೂ ಬೈಕ್ ನ  ಅಕ್ಷಲೆಟರ್  ಏರಿಸಿ KH ರೋಡ್ ತಲುಪುತ್ತಿದ್ದಂತೆ ಅ ದೃಶ್ಯ ಯೋಚನೆಗೀಡು ಮಾಡಿತು. ನನಗೆ ಅನುಭವಕ್ಕೆ ಬಂದ ಟ್ರಾಫಿಕ್ ಸಿಗ್ನಲ್ ಇರುವ ಏಕೈಕ ಫ್ಲಯ್ಓವರ್ (ರಿಚ್ಮಂಡ್ )ಬಸ್ , ಕಾರು , ದ್ವಿಚಕ್ರ ವಾಹನಗಳಿಂದ ತುಂಬಿ ನಿಂತಿತ್ತು. ಅವು ಮಿಸುಕಾಡುವ ಯಾವ ಲಕ್ಷಣಗಳು ಕಾಣಲಿಲ್ಲವಾದ್ದರಿಂದ ದಾರಿಯನ್ನು ಬದಲಿಸಿ ಸಣ್ಣ ರಸ್ತೆಗಳಲ್ಲಿ ಬೈಕ್ ನುಗ್ಗಿಸಿಕೊಂಡು ಬನ್ನೇರ ಗಟ್ಟ ರೋಡ್ ತಲುಪಿದೆ . ಅಲ್ಲಿಂದ ಟ್ರಾಫಿಕ್ ಸ್ವಲ್ಪ ಹೆಚಿದ್ದರೂ ಹೇಗೋ ಆಫಿಸ್ ತಲುಪಿದೆ. ಆಫೀಸನ್ ಪಾರ್ಕಿಂಗ್ ಜಾಗ ಭರ್ತಿಯಾಗಿತ್ತು. ಇನ್ನು ಇದ್ದದ್ದು ಆಫೀಸ್ ನ ಹಿಂದಿನ ಜಾಗ . ಅಲ್ಲೂ ಇದೇ ಕಥೆಯೆಂದು ತಿಳಿದಿತ್ತು. ಬೈಕನ್ನು ವಿಜಯ ಬ್ಯಾಂಕ್ ನವರಿಗೆ ರಿಸೆರ್ವೆ ಆಗಿದ್ದ ಜಾಗದ ಬಳಿ ಸ್ವಲ್ಪ ನಿಧಾನಿಸಿದ್ದೆ ಅ ದಪ್ಪನೆಯ ಸೆಕ್ಯೂರಿಟಿ ನನ್ನನ್ನೇ ಗುರಾಯಿಸಿದಂತೆ , ಆಫೀಸ್ ನ ಹಿಂದಿನ ಜಾಗಕ್ಕೆ ಅಟ್ಟಿದ. ಬೇರೆ ದಾರಿಯಿಲ್ಲದೆ ಎಲ್ಲ ಬೈಕ್ ಗಳ ಮದ್ಯೆ ತೂರಿಸಿ ನಿಲ್ಲಿಸಿ ಆಫೀಸ್ ನ ಕಡೆ ಹೆಜ್ಜೆ ಹಾಕತೊಡಗಿದೆ. ಆಗೊಂದು ಕಾರು ಪಾರ್ಕಿಂಗ್ ಗಾಗಿ ಹಿಂದೆ ಮುಂದೆ ಸರ್ಕಸ್ಸು ಮಾಡುತಿತ್ತು. ಲಿಫ್ಟ್ ಎಂದಿನಂತೆ 2nd ಫ್ಲೂರ್ ನಲ್ಲಿ ನಿಂತು ನಿದ್ರಿಸುತ್ತಿತ್ತು. ಇನ್ನು ಅದನ್ನು ಎಚ್ಹರಿಸಿ ಅದು ಗ್ರೌಂಡ್ ಫ್ಲೂರ್ ತಲುಪುವುದರೊಳಗೆ ನಾನು ಮೆಟ್ಟಿಲೇರಿ ಬೇಗ ತಲುಪಬಹುದೆಂದು ತಿಳಿದು ಅತ್ತ ಹೆಜ್ಜೆ ಹಾಕಿದೆ. ಸೆಕ್ಯೂರಿಟಿಗೆ wish ಮಾಡಿ ಕಾರ್ಡ್ ಪಂಚ್ ಮಾಡಿ ಎರಡು ಲಾಂಗ್ ಬೀಪ್ ಬಂದುದನ್ನು ದೃಡ ಪಡಿಸಿಕೊಂಡು ಒಳ ನಡೆದೆ. ವಾಚ್ ನತ್ತ ಹಾಗೆಯೇ ಕಣ್ಣು ಹಾಯಿಸಿದೆ. ಅದು ಎಂದಿನಂತೆ 5 ನಿಮಿಷ ತಡವೆಂದು ತನ್ನ ದೊಡ್ಡ ಕೈಯಿಂದ ತೋರಿಸಿ ಅಣಕಿಸುತ್ತಿತು

ಭಾನುವಾರ, ಮೇ 9, 2010

ಗಿಡುಗ

ಕ್ಲಾಸ್ ಶುರುವಾಗಲು ಇನ್ನೂ ಐದು ನಿಮಿಷಗಳು ಬಾಕಿಯಿತ್ತು. ನಾನು ಆತುರಾತುರವಾಗಿ ಎರಡನೇ ಬೆಂಚಿನಲ್ಲಿ ಕುಳಿತೆ. ಬ್ಯಾಗ್ ಕಳಚಿ ಬೋರ್ಡ್ ಕಡೆಗೆ ನೋಡಿದೆ. "ಕಪ್ಪೆರಾಣಿ" ಎಂಬ ಶೀರ್ಷಿಕೆಯೊಂದಿಗೆ ಒಂದು ಕಪ್ಪೆ ಕೊಡೆ ಹಿಡಿದು ನಿಂತಿರುವ ಚಿತ್ರ ಸುಂದರವಾಗಿ ಬೋರ್ಡ್ನ ಮೇಲೆ ಚಿತ್ರಿತವಾಗಿತ್ತು. ಅದು ಕ್ಲಾಸಿನ ಶ್ವೇತಳನ್ನು ಅಣಕಿಸಲೆಂದೇ ಬಿಡಿಸಿದ ಚಿತ್ರ ಎಂದು ತಿಳಿಯಲು ಹೆಚ್ಚು ಸಮಯ ಹಿಡಿಯಲಿಲ್ಲ .


ಹೌದು, ಶ್ವೇತಾಳ ಬೀಗುತನ, ಡ್ರೆಸ್ ವೈಖರಿ , ಮಾತಿನ ಶೈಲಿ ಎಲ್ಲವೂ ಅವಳು ಹಿಂದಿನ ಜನ್ಮದಲ್ಲಿ ಕ್ವೀನ್ ಎಲಿಜಬೆಥ್ ಆಗಿದ್ದಳೆಂದು ಸಾರುತ್ತಿದ್ದವು. ಹುಡುಗರು ಅದಕ್ಕೆ ಅವಳ ಮುಖವನ್ನು ಕಪ್ಪೆಗೆ ಕಷ್ಟಪಟ್ಟು ಹೋಲಿಕೆ ಮಾಡಿ ಚಿರಪರಿಚಿತ ಮಾಡಿಬಿಟ್ಟಿದ್ದರು .


ಶ್ವೇತ ಕುಳಿತಲ್ಲೇ ಕೈ ಹಿಸುಕಿಕೊಳ್ಳತೊಡಗಿದಳು . ಅವಳ ಮುಖದಲ್ಲಿ ಅಸಹನೆ ಎದ್ದು ಕಾಣುತ್ತಿತ್ತು. ಕನ್ನಡದ ಪ್ರೊಫೆಸರ್ ಆಗಮಿಸಿದರು. ಅವರು ಸ್ಟೇಜ್ ಹತ್ತಿದ್ದೇ ಬೋರ್ಡ್ ನ ಮೇಲೆ ಬರೆದಿದ್ದ ಚಿತ್ರ ನೋಡಿ "ಯಾರ್ರಿ ಅದು ಎಂತಹ ಒಳ್ಳೆಯ ಕಲೆಗಾರರು ಚಿತ್ರ ತುಂಬಾ ಚೆನ್ನಾಗಿ ಬರೆದಿದ್ದೀರಾ" ಎಂದು ಅಳಿಸಲು ಡಸ್ಟರ್ ಕೈಗೆತ್ತ್ತಿಕೊಂಡರು . ಅವರ ಮಾತಿಗೆ ಶ್ವೇತ ಒಬ್ಬಳನ್ನು ಬಿಟ್ಟು ಎಲ್ಲರ ಮುಖದಲ್ಲೂ ನಗೆ ಇಣುಕಿತು. ಹೀಗೆ ಪ್ರತಿದಿನ "ಕಪ್ಪೆರಾಣಿ"ಯ ವಿವಿದ ಭಂಗಿಯ ಚಿತ್ರಗಳು ಬೋರ್ಡ್ ನ ಮೇಲೆ ಕಾಣಿಸಿಕೊಳ್ಳುವುದು, ಪ್ರೊಫೆಸರ್ ಗಳು ಅದನ್ನು ಹೊಗಳಿ ಅಳಿಸುವುದು ನಡೆದಿತ್ತು. ಇಂದಿಗೂ ನೆನಪಿದೆ ಕ್ಲಾಸ್ ಇನ್ನೂ ಪ್ರಾರಂಬವಾಗಿರಲಿಲ್ಲ, ಸ್ವಲ್ಪ ತಡವಾಗಿದ್ದರಿಂದ ಕೊನೆಯ ಎರಡನೇ ಬೆಂಚಿನಲ್ಲಿ ನನಗೆ ಜಾಗ ದೊರಕಿತು. ಆಗಲೇ ಹಿಂದಿನ ಬೆಂಚಿನಲ್ಲಿ ಕಪ್ಪೆಯ ಬಗ್ಗೆ ಗುಸುಗುಸು ಮಾತು ಸಾಗಿತ್ತು. ನಾನು ಬ್ಯಾಗಿನಿಂದ ಬುಕ್ ತೆಗೆಯುವಷ್ಟರಲ್ಲೇ ಹೋ ಎಂದು ಇಡೀ ತರಗತಿಯೇ ಕೂಗಿತ್ತು . ಶ್ವೇತಳ ಟೇಬಲ್ ಮೇಲೆ ಒಂದು ನಿಜವಾದ ಕಪ್ಪೆ ಕುಳಿತಿತ್ತು. ಹಿಂದಿನ ಬೆಂಚ್ನವರು ಕಪ್ಪೆ ತಂದು ಅವಳ ಕಡೆ ಎಸೆದಿದ್ದರು. ಅವಳು ಕೋಪಗೊಂಡು ತನ್ನ ಸಹಚರಣಿಯರ ಜೊತೆ ಕ್ಲಾಸಿನಿಂದ ಎದ್ದು ಹೋದಳು . ಪರಿಸ್ಥಿತಿ ಅರಿವಾಗುವುದರಲ್ಲೇ ಅವಳು ಪ್ರಿನ್ಸಿಪಾಲರ ಜೊತೆ ಕ್ಲಾಸಿನಲ್ಲಿ ಹಾಜರಾಗಿಬಿಟ್ಟಿದ್ದಳು . ಸ್ಟೇಜ್ ಮೇಲೆ ಪ್ರಿನ್ಸಿಪಾಲರು ಕಪ್ಪೆ ತಂದು ಎಸೆದವರಾರೆಂದು ಕೇಳಿದರು. ತರಗತಿ ಮೌನಕ್ಕೆ ಶರಣು ಹೋಗಿತ್ತು. ಅಸಹನೆಯಿಂದ ಪ್ರಿನ್ಸಿಪಾಲರು ಒಂದು ದಿನ ಕ್ಲಾಸ್ ಡಿಸ್ಮಿಸ್ ಮಾಡಿ ಈ ಕೃತ್ಯ ಎಸಗಿದವರು ಒಪ್ಪಿಕೊಂಡರೆ ಬಿಟ್ಟುಬಿಡುವುದಾಗಿ ದಮಕಿ ಹಾಕಿ ತೆರಳಿದರು. ಆ ಕಪ್ಪೆ ಮಾತ್ರ ತನಗೆ ಏನೂ ತಿಳಿಯದಂತೆ ಕ್ಲಾಸಿನ ಮೂಲೆ ಸೇರಿಕೊಂಡು ಪಿಳಿಪಿಳಿ ನೋಡುತ್ತಿತ್ತು .


ಒಂದು ದಿನ ಡಿಸ್ಮಿಸ್ ನ ನಂತರ ತರಗತಿ ಮತ್ತೆ ಪ್ರಾರಂಬವಾಯಿತು. ಶ್ವೇತ ನಾಲ್ಕು ದಿನ ಕಾಲೇಜಿಗೆ ತಲೆಹಾಕಲಿಲ್ಲ. ಐದನೇ ದಿನ ಕ್ಲಾಸಿಗೆ ಹಾಜರಾಗ ತೊಡಗಿದಳು. ಅವಳ ಎಂದಿನ ಬೀಗುತನ ಮಾಯವಾಗಿತ್ತು. ಕೆಲವು ದಿನದ ನಂತರ ಬೋರ್ಡ್ ಮೇಲೆ ಮತ್ತೊಂದು ಚಿತ್ರ.




ಒಂದು ಗಿಡುಗನ ಚಿತ್ರದ ಕೆಳಗೆ "ಸಾರಿ ಕಪ್ಪೆರಾಣಿ" ಇಂತಿ ಗಿಡುಗ ಎಂದು ಬರೆಯಲಾಗಿತ್ತು.