ಇವತ್ತಾದರೂ ಆಫೀಸಿಗೆ ಬೇಗ ತಲುಪುವುದೆಂದು ನಿಶ್ಚಯಿಸಿ ೧೫ ನಿಮಿಷ ಬೇಗ ಮನೆ ಬಿಟ್ಟೆ. ದಾರಿಯಲ್ಲಿ ತಿಂಡಿ ಮುಗಿಸಿ ಬೈಕ್ ಹತ್ತಿ ಹೊರಟಿದ್ದೆ ೪ಥ್ ಬ್ಲಾಕ್ ನ ಸಿಗ್ನಲ್ ಲೈಟ್ ಕೆಂಪನೆ ಮುಖ ತೋರಿಸಿ ನಿಂತು ಹೊರಡುವಂತೆ ಮಾಡಿತು. ಅದರೂ ಬೈಕ್ ನ ಅಕ್ಷಲೆಟರ್ ಏರಿಸಿ KH ರೋಡ್ ತಲುಪುತ್ತಿದ್ದಂತೆ ಅ ದೃಶ್ಯ ಯೋಚನೆಗೀಡು ಮಾಡಿತು. ನನಗೆ ಅನುಭವಕ್ಕೆ ಬಂದ ಟ್ರಾಫಿಕ್ ಸಿಗ್ನಲ್ ಇರುವ ಏಕೈಕ ಫ್ಲಯ್ಓವರ್ (ರಿಚ್ಮಂಡ್ )ಬಸ್ , ಕಾರು , ದ್ವಿಚಕ್ರ ವಾಹನಗಳಿಂದ ತುಂಬಿ ನಿಂತಿತ್ತು. ಅವು ಮಿಸುಕಾಡುವ ಯಾವ ಲಕ್ಷಣಗಳು ಕಾಣಲಿಲ್ಲವಾದ್ದರಿಂದ ದಾರಿಯನ್ನು ಬದಲಿಸಿ ಸಣ್ಣ ರಸ್ತೆಗಳಲ್ಲಿ ಬೈಕ್ ನುಗ್ಗಿಸಿಕೊಂಡು ಬನ್ನೇರ ಗಟ್ಟ ರೋಡ್ ತಲುಪಿದೆ . ಅಲ್ಲಿಂದ ಟ್ರಾಫಿಕ್ ಸ್ವಲ್ಪ ಹೆಚಿದ್ದರೂ ಹೇಗೋ ಆಫಿಸ್ ತಲುಪಿದೆ. ಆಫೀಸನ್ ಪಾರ್ಕಿಂಗ್ ಜಾಗ ಭರ್ತಿಯಾಗಿತ್ತು. ಇನ್ನು ಇದ್ದದ್ದು ಆಫೀಸ್ ನ ಹಿಂದಿನ ಜಾಗ . ಅಲ್ಲೂ ಇದೇ ಕಥೆಯೆಂದು ತಿಳಿದಿತ್ತು. ಬೈಕನ್ನು ವಿಜಯ ಬ್ಯಾಂಕ್ ನವರಿಗೆ ರಿಸೆರ್ವೆ ಆಗಿದ್ದ ಜಾಗದ ಬಳಿ ಸ್ವಲ್ಪ ನಿಧಾನಿಸಿದ್ದೆ ಅ ದಪ್ಪನೆಯ ಸೆಕ್ಯೂರಿಟಿ ನನ್ನನ್ನೇ ಗುರಾಯಿಸಿದಂತೆ , ಆಫೀಸ್ ನ ಹಿಂದಿನ ಜಾಗಕ್ಕೆ ಅಟ್ಟಿದ. ಬೇರೆ ದಾರಿಯಿಲ್ಲದೆ ಎಲ್ಲ ಬೈಕ್ ಗಳ ಮದ್ಯೆ ತೂರಿಸಿ ನಿಲ್ಲಿಸಿ ಆಫೀಸ್ ನ ಕಡೆ ಹೆಜ್ಜೆ ಹಾಕತೊಡಗಿದೆ. ಆಗೊಂದು ಕಾರು ಪಾರ್ಕಿಂಗ್ ಗಾಗಿ ಹಿಂದೆ ಮುಂದೆ ಸರ್ಕಸ್ಸು ಮಾಡುತಿತ್ತು. ಲಿಫ್ಟ್ ಎಂದಿನಂತೆ 2nd ಫ್ಲೂರ್ ನಲ್ಲಿ ನಿಂತು ನಿದ್ರಿಸುತ್ತಿತ್ತು. ಇನ್ನು ಅದನ್ನು ಎಚ್ಹರಿಸಿ ಅದು ಗ್ರೌಂಡ್ ಫ್ಲೂರ್ ತಲುಪುವುದರೊಳಗೆ ನಾನು ಮೆಟ್ಟಿಲೇರಿ ಬೇಗ ತಲುಪಬಹುದೆಂದು ತಿಳಿದು ಅತ್ತ ಹೆಜ್ಜೆ ಹಾಕಿದೆ. ಸೆಕ್ಯೂರಿಟಿಗೆ wish ಮಾಡಿ ಕಾರ್ಡ್ ಪಂಚ್ ಮಾಡಿ ಎರಡು ಲಾಂಗ್ ಬೀಪ್ ಬಂದುದನ್ನು ದೃಡ ಪಡಿಸಿಕೊಂಡು ಒಳ ನಡೆದೆ. ವಾಚ್ ನತ್ತ ಹಾಗೆಯೇ ಕಣ್ಣು ಹಾಯಿಸಿದೆ. ಅದು ಎಂದಿನಂತೆ 5 ನಿಮಿಷ ತಡವೆಂದು ತನ್ನ ದೊಡ್ಡ ಕೈಯಿಂದ ತೋರಿಸಿ ಅಣಕಿಸುತ್ತಿತು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ