"ಬ್ರಹ್ಮ ಜೀವಿಗಳ ಸೃಷ್ಟಿಯಲ್ಲಿ ನಿರತನಾದ.ಜೀವಿಗಳಿಗೆ ಅವುಗಳದೇ ಆದ ಗಾತ್ರ, ಬಣ್ಣ ಹಾಗು ವೈಶಿಷ್ಟಗಳನ್ನು ನೀಡಿ ಅವುಗಳಿಗೆ ಜೀವ ತುಂಬಿದ.ಅವು ಜೀವಿಸಲು ಬೇಕಾದ ಎಲ್ಲ ಸೌಕರ್ಯಗಳನ್ನು ಸೃಷ್ಟಿಸಿದ.ಆನೆಗೆ ಬಲವನ್ನೂ,ಕೋಗಿಲೆಗೆ ಮಾಧುರ್ಯವನ್ನೂ, ನವಿಲಿಗೆ ಸೌಂದರ್ಯವನ್ನು ಹೀಗೆ ಆಯಾ ಪ್ರಾಣಿಗಳಿಗೆ ಒಂದೊಂದೇ ಗುಣವನ್ನೂ ನೀಡಿ ಮನುಜನಿಗೆ ಹೆಚ್ಹಿನ ಬುದ್ದಿವಂತಿಕೆಯನ್ನು ನೀಡಿದ.ಎಲ್ಲಾ ಪ್ರಾಣಿಗಳು ಸಂತಸಗೊಂಡವು.ಪ್ರತಿ ಸೃಷ್ಟಿ ಗೂ ಕೊನೆ ಇರಬೇಕೆಂಬ ಯೋಚನೆ ಬ್ರಹ್ಮನಿಗೆ ಬಂತು. ಅದರಂತೆ ಎಲ್ಲರಿಗೂ ಜೀವಿತಾವದಿ ನೀಡತೊಡಗಿದ.ವೃಕ್ಷಗಳಿಗೆ ಐನೂರು ವರ್ಷವನ್ನು ನೀಡಿದ. ನಂತರ ನೀರಿನಲ್ಲಿ ವಾಸಿಸುವ ಜೀವಿಗಳಲ್ಲಿ ಆಮೆಗೆ ಇನ್ನೂರು ವರ್ಷ ಹೀಗೆ ಮುಂದುವರೆಯಿತು. ಹೀಗೆ ಸರದಿಯಲ್ಲಿ ಮನುಷ್ಯನ ಸಾಕು ಪ್ರಾಣಿಗಳಾದ ನಾಯಿ ಹಾಗೂ ಕತ್ತೆಗಳೂ ಬಂದವು.ಕತ್ತೆಗೆ ನಲವತ್ತು ವರ್ಷ ಹಾಗೂ ನಾಯಿಗೆ ನಲವತೈದು ವರ್ಷಗಳ ಆಯಸ್ಸು ನೀಡಿದ.ಮನುಷ್ಯನಿಗೆ ಇಪ್ಪತ್ತು ವರ್ಷಗಳ ಸ್ವತಂತ್ರ ಜೀವನ ನೀಡಿದ. ಬುದ್ದಿವಂತ ಮನುಷ್ಯನಿಗೆ ತನ್ನ ಸಾಕು ಪ್ರಾಣಿಗಳಿಗೆ ತನಗಿಂತ ಹೆಚ್ಚಿನ ಆಯಸ್ಸು ನೀಡಿದ್ದು ಸಹಿಸಲಾಗಲಿಲ್ಲ.ತನಗೆ ಅ ನಾಯಿ ಕತ್ತೆಗಳ ಆಯಸ್ಸು ಬೇಕೆಂದು ಪಟ್ಟು ಹಿಡಿದ. ಬ್ರಹ್ಮನಿಗೆ ಬೇರೆ ವಿಧಿ ಇಲ್ಲದೆ ಕತ್ತೆ ನಾಯಿಗಳ ಆಯಾಸ್ಸಿನಿಂದ ತಲಾ ಇಪ್ಪತ್ತು ವರ್ಷಗಳನ್ನು ಕಳೆದು ಮನುಷ್ಯನಿಗೆ ನೀಡಿದ.ಮನುಷ್ಯನಿಗೆ ಸಂತಸವಾಯಿತು."
ನಾನು, ಪ್ರವೀಣ ನಮ್ಮ ಕಿವಿ ನಿಮಿರಿಸಿಕೊಂಡು ಕಥೆ ಕೇಳುತ್ತಿದ್ದವು.ರಮೇಶ ಮುಂದುವರೆಸಿದ.
"ಮನುಷ್ಯನ ಇಪ್ಪತ್ತು ವರ್ಷಗಳ ಆಯಸ್ಸು ಅರವತ್ತು ಆಯಿತು.ಆದರೆ ಅದರ ಪರಿಣಾಮ ಅನಂತರ ತಿಳಿಯತೊಡಗಿತು. ಅವನು ಮೊದಲ ಇಪ್ಪತ್ತು ವರ್ಷಗಳನ್ನು ಸ್ವತಂತ್ರವಾಗಿ ಕಳೆದನು. ನಂತರದ ಇಪ್ಪತ್ತು ವರ್ಷಗಳನ್ನು ಕತ್ತೆಯಂತೆ ದುಡಿದು ಕಳೆದನು.ಅನಂತರದ ಇಪ್ಪತ್ತು ವರ್ಷಗಳಲ್ಲಿ ನಾಯಿಯಂತೆ ತನ್ನ ಮತ್ತು ತನ್ನವರ ರಕ್ಷಣೆಗೆ ಕಾಯ್ದು ಕಳೆದನು." ರಮೇಶ ಕಥೆ ಮುಗಿಸಿದ.
ಅರವತ್ತು ವರ್ಷಗಳ ನಂತರ ಬದುಕುವವರು ಯಾರ ಆಯಸ್ಸನ್ನು ಪಡೆದರೆಂಬ ಪ್ರಶ್ನೆ ನನಗೆ ಹೊಳೆಯದೆ ಇರಲಿಲ್ಲ. ನಮ್ಮ ಕೈಲಿದ್ದ ಟೀ ಖಾಲಿಯಾಗಿತ್ತು.ನಂತರದ ವಿಷಯ ನಮ್ಮ ರಾಜನ ರಿಮ್ಮಿಯ ಕಡೆ ಹರಿಯಿತು.ಅವನ ರಿಮ್ಮಿ ಸತ್ತು ವಾರವೇ ಆಗಿತ್ತು. ಅದರ ಸಾವಿನಿಂದ ನಮ್ಮ ರಾಜ ಕಸಿವಿಸಿಗೊಂದಿದ್ದ.ಸದಾ ಮೌನಿಯಾಗಿರುತ್ತಿದ್ದ . ಹೌದು ಅವರ ಸಂಬಂದ ಹೇಗಿತ್ತೆಂದರೆ, ರಿಮ್ಮಿಗಾಗಿ ಹೋಟೆಲ್ನಿಂದ ಬಿಸಿ ಪರೋಟ ತಂದು ಹಾಕಿ, ತಾನು ಮನೆಯ ತಂಗಳ ಊಟ ಮಾಡುತ್ತಿದ್ದುದೇ ಸಾಕ್ಷಿ. ಅದು ಕೆವೆಲ ನಾಯಾಗಿರದೆ ಅವನ ಜೊತೆಗಾರನಾಗಿತ್ತು .ಅಂದು ದುಃಖ ತಡೆಯದೆ ಅತ್ತು ಬಿಟ್ಟಿದ್ದ. ಎಲ್ಲರೂ ಸಮಾಧಾನ ಮಾಡಿ ಕಳುಹಿಸಿದೆವು. ಮುಳ್ಳನ್ನು ಮುಳ್ಳಿ ನಿಂದಲೇ ತೆಗೆಯಬೇಕು ಇದು ಹಳೆಯದಾದರೂ, ನಮ್ಮ ಸುನಿಲನ "ಒಂದು ಹುಡುಗಿ ಮರೆಯಲು ಇನ್ನೊಂದು ಹುಡುಗಿ ಬೇಕು" ಫಿಲಾಸಫಿ ಇಲ್ಲಿಯಾದರು ಉಪಯೋಗವಾಗುವುದೆಂದು ಅಂದುಕೊಂಡೆವು. ಅದರಂತೆ ರಾಜನಿಗೆ ಅವನ ಹುಟ್ಟು ಹಬ್ಬಕ್ಕೆ ಇನ್ನೊಂದು ನಾಯಿಮರಿ ಕೊಡಲು ನಿರ್ಧರಿಸಿದೆವು. ಆದರೆ ರಾಜ ಮತ್ತೆ ಈ ಜ0ಜಾಟ ವೆಲ್ಲ ಬೇಡವೆಂದು ನಿರಾಕರಿಸಿದ.
Shaun Alexander told "Time heals all wounds, unless you pick at them." (ಸಮಯ ಎಲ್ಲಾ ಗಾಯವನ್ನು ಮರೆಸುತ್ತದೆ).

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ